ABOUT US

ರುಡ್ ಸೆಟ್ ಸಂಸ್ಥೆ ಬಗ್ಗೆ

ನಿರುದ್ಯೋಗ ನಮ್ಮ ದೇಶ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಲ್ಲೊಂದು, ಉದ್ಯೋಗವಕಾಶ ದೊರೆಯದೆ ಹತಾಶರಾದ ಭವಿಷ್ಯದ ಬಗ್ಗೆ ಆಶಾಭಾವನೆಯನ್ನು ತೊರೆದು ಅಕಾಂತರ ಮಂದಿ ನಿರುದ್ಯೋಗಿಗಳು ದಿಕ್ಕೇ ತೋಚದಂತಾಗಿದೆ. ನಿರುದ್ಯೋಗ ಸಮಸ್ಯೆಯ ಗಂಭೀರತೆಯನ್ನು ಅರಿತು 1982ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ನಡೆದ ಸಂಯುಕ್ತ ಚಿಂತನೆಯ ಸ್ವರೂಪವೆ ರುಡ್ ಸೇಟ್ ಸಂಸ್ಥೆ.

ಈ ಸಂಸ್ಥೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ, ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್‌ರವರಿಂದ ಜಂಟಿಯಾಗಿ ಪ್ರಾಯೋಜಿಸಲ್ಪಟ್ಟಿದೆ. ರುಡ್ ಸೆಟ್ ಸಂಸ್ಥೆ ಧರ್ಮಸ್ಥಳದ ಸಮೀಪ ಉಜಿರೆಯಲ್ಲಿ ಆರಂಭವಾಗಿ ಈಗ ದೇಶದಾದ್ಯಂತ 17 ರಾಜ್ಯಗಳಲ್ಲಿ 27 ಶಾಖೆಗಳನ್ನು ಹೊಂದಿದೆ. ಇಲ್ಲಿ ಊಟ ಮತ್ತು ವಸತಿ ಸೌಲಭ್ಯವುಳ, ಉಚಿತವಾದ, ಅಲ್ಲಾವಧಿ ತರಬೇತಿ ಕಾರ್ಯಕ್ರಮಗಳಿಂದ ನಿರುದ್ಯೋಗಿಗಳಿಗೆ ಆತ್ಮ ವಿಶ್ವಾಸ ತುಂಬಿ, ಪ್ರೇರಣೆಗೊಳಿಸಿ, ಸ್ವಂತ ಉದ್ಯಮಗಳನ್ನು ಸ್ಥಾಪಿಸುವುದರ ಮೂಲಕ ಅವರಿಗೆ ಸ್ವಾವಲಂಬಿ ಜೀವನ ಮಾತ್ರವಲ್ಲದೆ ಸುಂದರ ಬದುಕನ್ನು ನೀಡಿ ಆಶಾದೀಪವಾಗಿದೆ. ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ ಸೆಟ್) ಸಂಸ್ಥೆ.

ರುಡ್ ಸೆಟ್ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷರಾಗಿದ್ದು ಪ್ರವರ್ತಕ ಬ್ಯಾಂಕ್‌ಗಳ ಛೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಮತ್ತು ಪ್ರವರ್ತಕರ ಸಂಸ್ಥೆಗಳ ಉನ್ನತ ಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ. ಈ ಉತ್ಸತ ಮಂಡಳಿಯು ಆಗಾಗ್ಗೆ ಸಭೆ ಸೇರಿ ಸಂಸ್ಥೆಯ ಕಾರ್ಯವಿಧಾನ ಮತ್ತು ನೀತಿ ನಿರ್ದೇಶನಗಳನ್ನು ರೂಪಿಸುತ್ತದೆ. ಸಂಸ್ಥೆಯ ಪರಾಮರ್ಶಕ ಮಂಡಳಿಯಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಪ್ರವರ್ತಕ ಸಂಸ್ಥೆಗಳ ಉನ್ನತ ಅಧಿಕಾರಿಗಳು ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಆಗಾಗ್ಗೆ ಪರಾಮರ್ಶಿಸಿ ಸಲಹೆ ಸೂಚನೆ ನೀಡುತ್ತಾರೆ. ಪ್ರವರ್ತಕ ಬ್ಯಾಂಕಿನ ಅಧಿಕಾರಿಗಳಾದ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕರು ಎಲ್ಲಾ ಶಾಖೆಗಳ ದೈನಂದಿನ ಚಟುವಟಿಕೆಗಳ ಮೇಲುಸ್ತುವಾರಿ ವಹಿಸಿ ಸಂಸ್ಥೆಗಳ ಪ್ರಗತಿಯನ್ನು ಪ್ರವರ್ತಕ ಸಂಸ್ಥೆಗಳಿಗೆ ಮನವರಿಕೆ ಮಾಡುತ್ತಾರೆ. ರುಡ್ ಸೆಟ್ ಸಂಸ್ಥೆಯ ಪ್ರತಿ ಶಾಖೆಯಲ್ಲಿ ಪ್ರವರ್ತಕ ಸಂಸ್ಥೆಗಳ ಅಧಿಕಾರಿಗಳು, ಸರ್ಕಾರಿ ಅಧಿಕಾರಗಳು ಮತ್ತು ಇತರ ಧುರೀಣರನ್ನೊಳಗೊಂಡ ಸ್ಥಳೀಯ ಸಂಸ್ಥೆಯಲ್ಲಿ ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕಿನ ಅಧಿಕಾರಿಗಳು ಎರವಲು ಸೇವೆಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Our Team

M.M.Veerendra Kumar

Director, Rudseti Arashinakunte

Nelamangala


M Uday Kumar

Senior Faculties

Nalina G.R

Senior Faculties

S.R Arun Kumar

Senior Office Assistants

Srinivasaiah

Senior Office Assistants

Narasimhaiah

Attender

Hanumanthaiah

Watchman & Gardener